जाग तुझको दूर जाना ( महादेवी वर्मा )
ಎದ್ದೇಳು, ಬಹಳ ದೂರ ನೀನು ಸಾಗಬೇಕಾಗಿದೆ!
ಮಹಾದೇವಿ ವರ್ಮಾ
ಶಾಶ್ವತವಾಗಿ ಎಚ್ಚರದಿಂದಿರುವ ಕಣ್ಣುಗಳು ಇಂದು ನಿದ್ರಿಸುತ್ತಿವೆ, ಎಂತಹ ನಿರತ ನೋಟ!
ಎದ್ದೇಳು, ಬಹಳ ದೂರ ನೀನು ಸಾಗಬೇಕಾಗಿದೆ!
ಕದಲದ ಹಿಮದ ಎದೆಯಲ್ಲಿ ಇವತ್ತು ನಡುಕ ಮೂಡಿದರೂ,
ಅಥವಾ ಪ್ರಳಯದ ಕಣ್ಣೀರಿನಲ್ಲಿ ವ್ಯೋಮ್ ಆಕಾಶ ಮೌನವಾಗಿ ಅತ್ತರು;
ಇಂದು, ಕತ್ತಲೆಯ ಕರಾಳ ನೆರಳು ಬೆಳಕನ್ನು ಆವರಿಸಿದರೂ,
ಎಚ್ಚರಗೊಂಡು, ವಿದ್ಯುತ್ ಜ್ವಾಲೆಯಲ್ಲಿ ನಿರ್ದಯ ಚಂಡಮಾರುತವು ಮಾತಾಡಿದರು!
ಆದರೆ ವಿನಾಶದ ಹಾದಿಯಲ್ಲಿ ನಿನ್ನ ಗುರುತೊಂದು ಬಿಡಬೇಕು!
ಎದ್ದೇಳು, ಬಹಳ ದೂರ ನೀನು ಸಾಗಬೇಕಾಗಿದೆ!
ಬಂಧಿಸುತ್ತವೆಯೇ ನಿನ್ನನ್ನು ಈ ಆಕರ್ಷಿಕ ಮೇಣ ಬಂಧಗಳು?
ಅಡ್ಡಿಯಾಗುವುದೇ ನಿನ್ನ ದಾರಿಗೆ ಚಿಟ್ಟೆಗಳ ಬಣ್ಣಬಣ್ಣದ ರೆಕ್ಕೆಗಳು ?
ಜೇನಿನ ಮಧುರ ಗುಂಗು ಮಾಡುತ್ತದೆ ಮರೆಯುವಂತೆ ಜಗತ್ತಿನ ಅಳಲನ್ನು
ಮುಳುಗಿಸುತ್ತವೆಯೇ ನಿನ್ನನ್ನು ಇಬ್ಬನಿya ಈ ತೇವದ ಹೂವುಗಳು ?
ನಿನ್ನ ನೆರಳನ್ನು ನೀne ನಿನಗೆ ಸೆರೆಮನೆಯನ್ನು ಮಾಡಿಕೊಳ್ಳಬೇಡ!
ಎದ್ದೇಳು, ಬಹಳ ದೂರ ನೀನು ಸಾಗಬೇಕಾಗಿದೆ!
ಸಣ್ಣ ಕಣ್ಣೀರಿನ ಹನಿಯಿಂದ ಕಠೋರ ಹೃದಯ ಕರಗಿತು,
ಕೊಟ್ಟು ಯಾರಿಗೆ ಜೀವದ ಅಮೃತವನ್ನು ನೀನು, ಎರಡು ಗುಟುಕು ಮದ್ಯವನ್ನು ತಂದೆ ?
ಮುಳುಗಿಸಿ ಚಂದನದ ಪರಿಮಳದಲ್ಲಿ ಬಿರುಗಾಳಿಯು ನಿದ್ದೆಗೆ ಜಾರಿದೆಯೇ?
ಶಾಶ್ವತ ನಿದ್ರೆಯ ರೂಪದಲ್ಲಿ ಪ್ರಪಂಚದ ಶಾಪ ಬಂದಿದೆಯೇ?
ಚಿರಂಜೀವಿಯಾದ ನೀನು ನಿನ್ನ ಹೃದಯದಲ್ಲಿ ಸಾವನ್ನು ಏಕೆ ಬಯಸುವೆ ?
ಎದ್ದೇಳು, ಬಹಳ ದೂರ ನೀನು ಸಾಗಬೇಕಾಗಿದೆ!
ಹೇಳಬೇಡ ತಣ್ಣನೆಯ ಉಸಿರಿನೊಂದಿಗೆ ಮರೆಯಿರಿ ಈಗ ಆ ಸುಡುವ ಕಥೆಯನ್ನು
ಎದೆಯಲ್ಲಿ ಸುಡುವ ಬೆಂಕಿಯಿದ್ದರೂ ಕಣ್ಣೀರಿನಿಂದ ಕಣ್ಣುಗಳನ್ನು ಅಲಂಕರಿಸುತ್ತವೆ
ಸೋಲು ಆಗುವುದು ನಿನ್ನ ವಿಜಯದ ಧ್ವಜವು
ಪತಂಗದ ಬೂದಿ ಕ್ಷಣಿಕ, ಅಮರ ದೀಪದ ಸಂಕೇತ!
ಬೆಂಕಿಯ ಹಾಸಿಗೆಯ ಮೇಲೆ ನೀನು ಮೃದು ಮೊಗ್ಗುಗಳನ್ನು ಹಾಸಬೇಕು!
ಎದ್ದೇಳು, ಬಹಳ ದೂರ ನೀನು ಸಾಗಬೇಕಾಗಿದೆ!
*******************
जाग तुझको दूर जाना!
महादेवी वर्मा
चिर सजग आँखे उनींदी आज कैसा व्यस्त बाना!
जाग तुझको दूर जाना!
अचल हिमगिरी के ह्रदय में आज चाहे कंप हो ले,
या प्रलय के आँसुओं में मौन अलसित व्योम रो ले;
आज पी आलोक को डोले तिमिर की घोर छाया,
जागकर विद्युत-शिखाओं में निठुर तूफ़ान बोले!
पर तुझे है नाश-पथ पर चिन्ह अपने छोड़ आना!
जाग तुझको दूर जाना!
बाँध लेंगे क्या तुझे यह मोम के बंधन सजीले?
पंथ की बाधा बनेंगे तितलियों के पर रंगीले?
विश्व का क्रंदन भुला देगी मधुप की मधुर गुनगुन,
क्या डुबा देंगे तुझे यह फूल के दल ओस-गीले?
तू न अपनी छाँह को अपने लिए कारा बनाना!
जाग तुझको दूर जाना!
वज्र का उर एक छोटे अश्रु-कण में धो गलाया,
दे किसे जीवन सुधा दो घूँट मदिरा माँग लाया?
सो गई आँधी मलय की बात का उपधान ले क्या?
विश्व का अभिशाप क्या चिर नींद बनकर पास आया?
अमरता-सुत चाहता क्यों मृत्यु को उर में बसाना?
जाग तुझको दूर जाना!
कह न ठंडी साँस में अब भूल वह जलती कहानी,
आग हो उर में तभी दृग में सजेगा आज पानी;
हार भी तेरी बनेगी मानिनी जय की पताका,
राख क्षणिक पतंग की है अमर दीपक की निशानी!
है तुझे अंगार-शय्या पर मृदुल कलियाँ बिछाना!
जाग तुझको दूर जाना!
अनुवादक: डॉ. मैथिलि पी राव
************
